Gajendragad : ದ್ವಿತೀಯ ಪಿಯುಸಿ ಫಲಿತಾಂಶ : ವಿಜ್ಞಾನ ವಿಭಾಗದಲ್ಲಿ ಪ್ರಾಂಜಲಿ ಕಮತರ ಶೇಕಡಾ 87% ಸಾಧನೆ

ಗಜೇಂದ್ರಗಡದ ಪ್ರಾಂಜಲಿ ಕಮತರ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ 

ಗಜೇಂದ್ರಗಡ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗಜೇಂದ್ರಗಡದ ವಿದ್ಯಾರ್ಥಿನಿ ಪ್ರಾಂಜಲಿ ತಿರುಪತಿ ಕಮತರ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 87 ಪ್ರತಿಶತ ಸಾಧನೆ ಮಾಡಿದ್ದಾರೆ. ಮಗಳ ಸಾಧನೆಗೆ ತಂದೆ ತಿರುಪತಿ ಕಮತರ್ ಮತ್ತು ಶ್ರೀಮತಿ ರೇಣುಕಾ ತಿರುಪತಿ ಕಮತರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 
ದ್ವಿತೀಯ ಪಿಯುಸಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಶ್ರೀರಾಮನಗರದಲ್ಲಿರುವ ಶ್ರೀವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಾಂಜಲಿ 600 ಕ್ಕೆ 522 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿ ಪ್ರಾಂಜಲಿ ಸಾಧನೆಗೆ ವಿದ್ಯಾನಿಕೇತನ ಕಾಲೇಜಿನ ಪ್ರಾಚಾರ್ಯ  ಜಗನ್ನಾದರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿ ಪ್ರಾಂಜಲಿ ಮಾತನಾಡಿ,ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಅತ್ಯುತ್ತಮ ಉಪನ್ಯಾಸಕರಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಪಾಠ ಹೇಳಿದ್ದರಿಂದ ಹಾಗೂ ನಮ್ಮ ತಂದೆ ತಾಯಿಗಳು ನನಗೆ ಓದಲು ಪ್ರೋತ್ಸಾಹ ನೀಡಿದ್ದರಿಂದ ನಾನು ಸಾಧನೆ ಮಾಡಲು ಅನುಕೂಲವಾಯಿತು.ಮುಂಬರುವ ದಿನಗಳಲ್ಲಿ ನನಗೆ ಇಂಜಿನಿಯರ್ ಆಗುವ ಕನಸಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

              ನಿರ್ಭಯ ನ್ಯೂಸ್ ಕನ್ನಡ 
                   "ಇದು ಪ್ರಜಾಧ್ವನಿ"

Post a Comment

Previous Post Next Post

FLASH

Contact for News and Ads on Nirbhaya News Kannada : 9060723440