YELBURGA :ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಮೋದಿಜಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು : ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ

ಯಲಬುರ್ಗಾದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ

ಯಲಬುರ್ಗಾ :

ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಸಾಯಿ ಪ್ಯಾಲೇಸನ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲಾ ಲೋಕಸಭಾ ಚುನಾವಣೆ ಪ್ರಯುಕ್ತ ಬೂತ್ ವಿಜಯ ಅಭಿಯಾನ ಮತಯಾಚನೆ ಕಾರ್ಯಕ್ರಮ ಜರುಗಿತು.
ಎನ್‌ಡಿಎ ಮೈತ್ರಿಕೂಟದ ಕೊಪ್ಪಳ ಲೋಕಸಭಾ ಅಭ್ಯರ್ಥಿ ಬಸವರಾಜ ಕ್ಯಾವಟರ ಮಾತನಾಡಿ ನಾನು ರಾಜಕೀಯಕ್ಕೆ ಹೊಸಬನಲ್ಲ, ನಮ್ಮ ತಂದೆಯವರು ಒಂದು ಬಾರಿ ಶಾಸಕರಾಗಿ, ಹೈದರಾಬಾದ್ ಕರ್ನಾಟಕ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾನು ವೃತ್ತಿಯಲ್ಲಿ  ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದರು ಸಹ ರಾಜಕೀಯ ಅನುಭವ ನನಗಿದೆ. ನಾನು ವೃತ್ತಿಯಲ್ಲಿ ವೈದ್ಯನಾಗಿ ಸೇವೆ ಮಾಡುತ್ತಾ  ಸಾರ್ವಜನಿಕರ ಸಂಪರ್ಕದಲ್ಲಿದ್ದೇನೆ. ಕೇಂದ್ರ ಹಾಗೂ ರಾಜ್ಯದ ಮುಖಂಡರು ನನ್ನನ್ನ ಗುರುತಿಸಿ ಜನರ ಸೇವೆ ಮಾಡಲು ಅವಕಾಶ ನೀಡಿದ್ದಾರೆ . ನಮ್ಮ ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು ಅಂದಾಗ ಮಾತ್ರ ರಾಷ್ಟ್ರ ಹಾಗು ರಾಜ್ಯದ ಅಭಿವೃದ್ಧಿ ಆಗುತ್ತದೆ. ಈಗಾಗಲೇ ಸಂಸದ ಸಂಗಣ್ಣ ಕರಡಿಯವರು ನಮ್ಮ ಜಿಲ್ಲೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ಇನ್ನು ಹೆಚ್ಚಿನ ಮಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಕೊಪ್ಪಳ ಜಿಲ್ಲೆಯ ಜನರು ನನಗೆ ಆಶೀರ್ವಾದ ಮಾಡಿ ಹೆಚ್ಚಿನ ಮತಗಳನ್ನು ನೀಡಿ ನನ್ನನು ಆಯ್ಕೆ ಮಾಡಿ ಎಂದು ಅವರು ಮತಯಾಚನೆ ಮಾಡಿದರು.
ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕುಷ್ಟಗಿ ತಾಲೂಕು ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ ಹಳಿ ಇಲ್ಲದೆ ರೈಲು ಓಡಿಸಿದವರು ಯಾರಾದರೂ ಇದ್ದರೆ ಅದು ರಾಯರೆಡ್ಡಿಯವರು. ಮಂತ್ರಿಗಿರಿ ತಪ್ಪಿದ್ದಕ್ಕೆ ಏನಾದರೂ ಹೆಚ್ಚು ಕಡಿಮೆ ಆದಿತು ಅಂತ ಸಿದ್ದರಾಮಯ್ಯನವರು ರಾಯರೆಡ್ಡಿಗೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಪಟ್ಟ ಕೊಟ್ಟಿದ್ದಾರೆ. ಆದರೆ ರಾಯರೆಡ್ಡಿಯವರು ಎಲ್ಲ ನನಗೆ ಗೊತ್ತಿದೆ, ರಾಜಕೀಯ, ಅರ್ಥಶಾಸ್ತ್ರ ಯಾರಿಗೂ ಗೊತ್ತಿಲ್ಲ ನಾನೇ ಜಾಣನೆಂದು ವರ್ತಿಸುತ್ತಿದ್ದಾರೆ. ಸಾಮಾಜಿಕ ಪರಿಕಲ್ಪನೆ ಇಲ್ಲದಿರುವ ಶಾಸಕ ಯಾರಾದರೂ ಇದ್ದರೆ ಅದು ಬಸವರಾಜ ರಾಯರೆಡ್ಡಿ. ರಾಯರೆಡ್ಡಿಯವರು ಮೊದಲು ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡೋದನ್ನ ಕಲಿತುಕೊಳ್ಳಬೇಕು.ಇನ್ನು ಜಿಲ್ಲೆಯ ಉಸ್ತುವಾರಿ ಸಚಿವ ತಂಗಡಗಿ ಅವರು ಅಧಿಕಾರದ ಮದದಲ್ಲಿ ಮೋದಿ ಮೋದಿ ಅಂದವರಿಗೆ ಕಪಾಳಕ್ಕೆ ಹೊಡೆಯಿರಿ ಅಂತ ಹೇಳಿದ್ದಾರೆ.ನಮ್ಮ ದೇಶದ 80% ಜನ ಮೋದಿ ಅವರನ್ನು ಇಷ್ಟಪಡುತ್ತಾರೆ. ಮೋದಿ ಅವರ ಅಭಿಮಾನಿಗಳು ಒಂದು ವೇಳೆ ಕೈ ಎತ್ತಿದರೆ ಅವರ ಕೈ ಕೂಡ ಸಿಗುವುದಿಲ್ಲ.ವಿಶ್ವಕ್ಕೆ ನೆಚ್ಚಿನ ನಾಯಕರಾಗಿರುವ ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಹಾಗೂ ಕೀಳಾಗಿ ಮಾತನಾಡುತ್ತಿರುವುದು ಕಾಂಗ್ರೆಸ್ನವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿಗಳನ್ನು ಬಿಟ್ಟರೆ ರಾಜ್ಯದಲ್ಲಿ ಯಾವ ಅಭಿವೃದ್ಧಿಪರ ಕೆಲಸಗಳು ನಡೆದಿಲ್ಲ ಎಂದು ಅವರು ಹೇಳಿದರು.
ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ ಕರ್ನಾಟಕದಲ್ಲಿಯೇ ಅತ್ಯಂತ ಸ್ವಾರ್ಥಿ ಹಾಗೂ ದುರಹಂಕಾರಿ ರಾಜಕಾರಣಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಸಿದ್ದರಾಮಯ್ಯನಿಗೆ ಉಪಕಾರ ಮಾಡಿದವರು ಇವತ್ತು ಯಾರು ಆತನ ಜೊತೆಗಿಲ್ಲ. ಉಪಕಾರ ಮಾಡಿದವರಿಗೆ ಮೋಸ ಮಾಡೋದೇ ಸಿದ್ದರಾಮಯ್ಯನ ಕೆಲಸವಾಗಿದೆ. ಕಾಂಗ್ರೆಸ್ ಕಚೇರಿ ನಡೆಸುವುದಕ್ಕೆ ಪ್ರತಿ ತಿಂಗಳು 10 ಲಕ್ಷ ಕೊಡುತ್ತಿದ್ದ ಸತೀಶ ಜಾರಕಿಹೊಳಿಗೆ ಮೋಸ ಮಾಡಿದವನು ಸಿದ್ದರಾಮಯ್ಯ. ಸ್ವಾಭಿಮಾನ ಎನ್ನುವ ಶಬ್ದಕ್ಕೆ ನೀನು ಅಪಮಾನ ಮಾಡುತ್ತಿದ್ದೀಯಪ್ಪ ಸಿದ್ದರಾಮಯ್ಯ ಎಂದು ಅವರು ಟೀಕಿಸಿದರು. ಜೆಡಿಎಸ್ ನಾಯಕರು ಹಾಗೂ ಕೆಆರ್ ಪಿಪಿ ಪಕ್ಷದ ರೆಡ್ಡಿಯವರು ನಮ್ಮ ಜೊತೆ ಕೈಜೋಡಿಸಿದ್ದಾರೆ.ಈ ಸಲದ ಚುನಾವಣೆಯಲ್ಲಿ ಗೆಲುವು ನಮ್ಮದೇ. ಈ ದೇಶದ ಪ್ರಗತಿಗಾಗಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಸುದೀರ್ಘವಾಗಿ ಚರ್ಚೆ ಮಾಡಿ ಎನ್ ,ಡಿಎ ಪಕ್ಷದಲ್ಲಿ ಮೈತ್ರಿಯಾಗಿ ಸಮನ್ವಯ ಸಮಿತಿ ರಚನೆ ಮಾಡಿಕೊಂಡು 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ ಹೊಂದಿದ್ದು ಅಭ್ಯರ್ಥಿಗಳ ಸಲುವಾಗಿ ಸಂಪೂರ್ಣ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಎಲ್ಲಿ ಎಂದು ಕೇಳುವ ಕಾಂಗ್ರೆಸ್ ನವರು ಮೊದಲು ನೀವು ಎಲ್ಲಿದ್ದೀರಿ ಅನ್ನೋದನ್ನ ತೋರಿಸಿ, ನಿಮ್ಮ ತಟ್ಟೆಯಲ್ಲಿ ನೊಣ ಸತ್ತು ಬಿದ್ದಿದೆ ನಿಮ್ಮದು ನೀವು ನೋಡಿಕೊಳ್ಳಿ ಎಂದು ಟೀಕಿಸಿದರು. ಜನತಾ ಪರಿವಾರದ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತರ ಪರವಾಗಿ ಮೊಟ್ಟ ಮೊದಲು ಕೆಲಸ ಮಾಡಿದ ಸರ್ಕಾರ ಯಾವುದಾದರು ಇದ್ದರೆ ಅದು ಕುಮಾರಸ್ವಾಮಿ ಅವರದು, ನಮ್ಮ ದೇಶದಲ್ಲಿಯೇ ರೈತರ ಸಾಲ ಮನ್ನಾ ಮಾಡಿದ ಮೊದಲ ಸರ್ಕಾರ ಹಾಗೂ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಅವರು ಹೇಳಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ನಮ್ಮ ದೇಶದಲ್ಲಿ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ಉಳಿದಿದೆ ಎಂದರೆ ಅದು ಬಿಜೆಪಿ ಪಕ್ಷದಿಂದ ಹಾಗೂ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ, ಕಾಂಗ್ರೆಸ್ ನವರಿಗೆ ಯಾವುದೇ ಸಂಸ್ಕಾರ ಗೊತ್ತಿಲ್ಲ, ಮೋದಿ ಮೋದಿ ಅಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳುವ ಶಿವರಾಜ ತಂಗಡಗಿಯವರೇ 130 ಕೋಟಿ ಜನರ ಕೆನ್ನೆಗೆ ಬಾರಿಸುವ ತಾಕತ್ತು ನಿಮಗೆ ಇದಿಯಾ ಎಂದು ಸಚಿವ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು.ಕೊಪ್ಪಳ ಜಿಲ್ಲೆಯಲ್ಲಿ ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ನಾಲ್ಕನೇ ಬಾರಿಯೂ ಗೆಲುವು ಸಾಧಿಸುತ್ತೇವೆ ಎಂದು ಅವರು ಹೇಳಿದರು.
ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ ಮೋದಿಜಿಯವರ ಜನಪರ ಯೋಜನೆಗಳು ಪ್ರತಿಯೊಬ್ಬರಿಗೂ ಇಷ್ಟವಾಗಿವೆ.ಮೋದಿಜಿಯವರ 10 ವರ್ಷದ ಆಡಳಿತ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆಗಾಗಿ ಮೋದಿಜಿ ಅವರ ಆಡಳಿತ ಅತ್ಯವಶ್ಯಕವಾಗಿದೆ. ಈ ದೇಶಕ್ಕೆ ಮೋದಿಜಿ ಅವರನ್ನ ಆಯ್ಕೆ ಮಾಡಲು ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವ್ವಟರಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಎಂದು ಅವರು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಕಾರ್ಯಕ್ರಮಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಸಿ.ವಿ ಚಂದ್ರಶೇಖರ, ಕೆ.ಕರಿಯಪ್ಪ,ಮಾಜಿ ಶಾಸಕ ಬಸವರಾಜ ದಡೆಸೂಗೂರ, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಲೋಕಸಭಾ ಸಂಚಾಲಕ ಗಿರೀಗೌಡ, ರಾಜು ಬಾಕಳೆ, ಜೆಡಿಎಸ್‌ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ,ಮಾರುತಿ ಹೊಸಮನಿ, ಶಕುಂತಲಾ ಮಾಲಿಪಾಟೀಲ, ಜೆಡಿಎಸ್‌ ವಕ್ತಾರ ಮಲ್ಲನಗೌಡ ಕೊನನಗೌಡ್ರ ,ಶರಣಪ್ಪ ರಾಂಪುರ ಬಿಜೆಪಿ ತಾಲೂಕ ಅಧ್ಯಕ್ಷ ಮಾರುತಿ ಗಾವರಾಳ, ಜೆಡಿಎಸ್‌ ತಾಲೂಕ ಅಧ್ಯಕ್ಷ ಬಸವರಾಜ ಗುಳಗುಳಿ,
ಸಿ ಎಚ್ ಪೊಲೀಸಪಾಟೀಲ್, ಅಯ್ಯನಗೌಡ ಕೆಂಚಮ್ಮನವರ,ತಾಲೂಕು ವಕ್ತರ ವೀರಣ್ಣ ಹುಬ್ಬಳ್ಳಿ, ಪ್ರತಾಪ್ ಗೌಡ ಪಾಟೀಲ, ಚಂದ್ರಶೇಖರ ಹಲ್ಗೇರಿ, ವೀರಭದ್ರಪ್ಪ ನಾಯಕ, ಬಸವಲಿಂಗಪ್ಪ ಭೂತೆ, ನರಸಿಂಹರಾವ್ ಕುಲಕರ್ಣಿ, ಮಹೇಶ ಭೂನಕೊಪ್ಪ, ಶಿವಶಂಕರಾವ ದೇಸಾಯಿ, ವೀರೇಶ ಮಹಾಂತಯ್ಯನ ಮಠ, ಈಶಪ್ಪ ಹಿರೇಮನಿ  ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ ನ ಮುಖಂಡರು ಹಾಗೂ ಕಾರ್ಯಕರ್ತರು, ಉಪಸ್ಥಿತರಿದ್ದರು.

                   ನಿರ್ಭಯ ನ್ಯೂಸ್ ಕನ್ನಡ
                      "ಇದು ಪ್ರಜಾ ಧ್ವನಿ"

Post a Comment

Previous Post Next Post

FLASH

Contact for News and Ads on Nirbhaya News Kannada : 9060723440