YLB : ರಾಜ್ಯ ಸರ್ಕಾರದಿಂದ ಹಡಪದ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಹರ್ಷ
ಯಲಬುರ್ಗಾ ತಾಲೂಕ ಶ್ರೀ ಹಡಪದ ಅಪ್ಪಣ್ಣ ಸಮಾಜದಿಂದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಗೆ ಸನ್ಮಾನ
ಯಲಬುರ್ಗಾ: ಹಡಪದ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ "ಹಡಪದ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ "ಘೋಷಣೆ ಮಾಡಿದ್ದಕ್ಕೆ ಯಲಬುರ್ಗಾ ತಾಲೂಕ ಹಡಪದ ಅಪ್ಪಣ್ಣ ಸಮಾಜ ಬಾಂಧವರು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ ಯಲಬುರ್ಗಾ ತಾಲೂಕ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು.
ಯಲಬುರ್ಗಾ ತಾಲೂಕ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಈರಣ್ಣ ಬಳೂಟಗಿ ಮಾತನಾಡಿ ಹಡಪದ ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಿ ನಮ್ಮ ಸಮಾಜಕ್ಕೆ ನ್ಯಾಯ ಕಲ್ಪಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಹಿಂದೆ ಬಿ.ಜೆ.ಪಿ. ಸರ್ಕಾರ ಇದ್ದಾಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಹಡಪದ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಡಪದ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ ಆದೇಶ ನೀಡಿದರು. ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿತ್ತು ಆದರೆ ಈಗಿನ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹಿಂದುಳಿದ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಈ ಒಂದು ನಿಗಮವನ್ನು ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಆದೇಶ ಹೊರಡಿಸಿದ್ದು, ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒತ್ತಡ ನೀಡಿದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸಚಿವರಿಗೂ ಹಾಗೂ ಶಾಸಕರುಗಳಿಗೆ ರಾಜ್ಯ ಹಡಪದ ಸಮಾಜದ ವತಿಯಿಂದ, ಜಿಲ್ಲಾ ಹಡಪದ ಸಮಾಜ ವತಿಯಿಂದ ಹಾಗೂ ಯಲಬುರ್ಗಾ ತಾಲೂಕ ಸಮಾಜದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಕಾರ್ಯದರ್ಶಿ ಶರಣಪ್ಪ ಹಡಪದ ಮಾತನಾಡಿ ಹಡಪದ ಸಮಾಜವು ಸುಧೀರ್ಘವಾಗಿ 25 ವರ್ಷಗಳಿಂದ ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ಮತ್ತು ತಾಲೂಕಿನಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಹೋರಾಟ ಮಾಡಿದ್ದು ಹಲವು ವಿಭಿನ್ನ ರೀತಿಯ ಹೋರಾಟಗಳನ್ನು ಮಾಡಿದ್ದೇವೆ, ತಮಟೆ ಚಳುವಳಿ, ಅರೆಬೆತ್ತಲೆ ಪ್ರತಿಭಟನೆ, ಧೀರ್ಘದಂಡ ನಮಸ್ಕಾರಗಳು, ಕ್ಷೌರ ಅಣಕು ಪ್ರದರ್ಶನ ಹೋರಾಟ, ಉರುಳು ಸೇವೆ ಹೋರಾಟ, ಉಪವಾಸ ಸತ್ಯಾಗ್ರಹ ಹಾಗೂ ಹಡಪದ ಅಪ್ಪಣ್ಣ ಸಮಾಜದ ನಿಗಮಕ್ಕಾಗಿ ಹಲವಾರು ಪ್ರತಿಭಟನೆ ನಡೆಸಿ ರಾಜ್ಯ ನಾಯಕರ ಹಾಗೂ ಹಡಪದ ಅಪ್ಪಣ್ಣ ಶ್ರೀಗಳ ಸಮ್ಮುಖದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡಿದ್ದೇವೆ. ಯಾವುದೇ ಸರ್ಕಾರ ಇರಲಿ ಆ ಸರ್ಕಾರಕ್ಕೆ ಎಚ್ಚರಿಸುವ ಮೂಲಕ ಹೋರಾಟ ಮಾಡಿದ್ದೇವೆ. ನಮ್ಮ ಬಹು ದಿನಗಳ ಬೇಡಿಕೆ ಇಡೇರಿದೆ, ಈ ಗೆಲುವು ಇಡೀ ಕರ್ನಾಟಕ ರಾಜ್ಯದ ಸಮಸ್ತ ಪ್ರತಿಯೊಂದು ಹಳ್ಳಿ ಹಳ್ಳಿಯ ಹಡಪದ ಸಮಾಜದ ಗೆಲವು ಎಂದು ಹೆಮ್ಮೆಯಿಂದ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಗೌರವಾಧ್ಯಕ್ಷ ಶಿವಪ್ಪ ಶಾಸ್ತ್ರಿ, ಉಪಾಧ್ಯಕ್ಷ ದೇವಪ್ಪ ಶಾಸ್ತ್ರಿ, ಕಾರ್ಯದರ್ಶಿ ಶರಣಪ್ಪ ಹಡಪದ, ಯುವ ಘಟಕದ ಅಧ್ಯಕ್ಷ ವೀರೇಶ ಸಂಗನಾಳ, ಉಪಾಧ್ಯಕ್ಷ ಪ್ರಭು ತಲ್ಲೂರ, ಕಾರ್ಯದರ್ಶಿ ಶರಣಪ್ಪ ಕರಮುಡಿ, ನಗರ ಘಟಕದ ಅಧ್ಯಕ್ಷ ಹನುಮಂತಪ್ಪ ಶಾಸ್ತ್ರಿ ಉಪಾಧ್ಯಕ್ಷ ಆನಂದ ಹಡಪದ ಕಾರ್ಯದರ್ಶಿ ಮಂಜುನಾಥ ಹಡಪದ, ಸಮಾಜದ ಮುಖಂಡರುಗಳಾದ ಮಲ್ಲಿಕಾರ್ಜುನ ಹಡಪದ, ಪ್ರಭು ಹಡಪದ, ಚನ್ನಪ್ಪ ನಿಡಶೇಷಿ, ವೀರೇಶ ಹಡಪದ, ಶಿವಕುಮಾರ ಹಡಪದ,ಸುರೇಶ ಹಡಪದ, ಶಿವಪ್ಪ ಮಾರನಾಳ, ರಾಜು ಹಡಪದ, ಸಂಗಪ್ಪ ಬ್ಯಾಲಿಹಾಳ, ಕಪ್ಪತಪ್ಪ ಬೆವೂರು, ಹನುಮೇಶ ಗುನ್ನಾಳ, ಗವಿಸಿದ್ದಪ್ಪ ಮ್ಯಾದನೆರಿ,ನಾಗರಾಜ ಬಂಡಿ,ರೇವಣಪ್ಪ ಕೊನಸಾಗರ, ಬಸವರಾಜ ಬಂಡಿ, ಬಸವರಾಜ ಹಡಪದ, ಕುಮಾರಸ್ವಾಮಿ ಮ್ಯಾದನೆರಿ, ಶಿವಾನಂದಪ್ಪ ಕಟಿಗೆಹಳ್ಳಿ, ದೇವಪ್ಪ ಬಾದರ ಬಂಡಿ, ಗುರು ಹಡಪದ, ಮುತ್ತಪ್ಪ ಹಡಪದ ಮತ್ತಿತರರು ಇದ್ದರು.
ನಿರ್ಭಯ ನ್ಯೂಸ್ ಕನ್ನಡ
" ಇದು ಪ್ರಜಾ ಧ್ವನಿ "
Post a Comment