ವಿಜೃಂಭಣೆಯಿಂದ ಜರುಗಿದ ಗ್ರಾಮದೇವತೆ ಶ್ರೀ ದ್ಯಾಮಾಂಬಿಕಾ ದೇವಿ ಜಾತ್ರಾ ಮಹೋತ್ಸವ

ಯಲಬುರ್ಗಾ ಪಟ್ಟಣದ ಶ್ರೀ ಗ್ರಾಮದೇವತೆ ಶ್ರೀ ದ್ಯಾಮಾಂಬಿಕಾದೇವಿ ಜಾತ್ರಾ ಮಹೋತ್ಸವ

ಯಲಬುರ್ಗಾ : ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮಾಂಬಿಕಾ ದೇವಿಯ ಮೊದಲ ದಿನದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. 
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆಯನ್ನ ಪಟ್ಟಣದ ಭಕ್ತರು ಅತ್ಯಂತ ಉತ್ಸಾಹದೊಂದಿಗೆ ಸಕಲ ವಾದ್ಯಗಳ ಮೂಲಕ ಅದ್ದೂರಿಯಾಗಿ ಸ್ವಾಗತ ಮಾಡುತ್ತ ದೇವಿಯ ಉತ್ಸವ ಮೂರ್ತಿಯನ್ನು ಪಟ್ಟಣದ ತುಂಬಾ ಮೆರವಣಿಗೆ ಮಾಡಿದರು.
ಬೆಳಗ್ಗೆ 9.00 ಗಂಟೆಗೆ ಗ್ರಾಮದೇವತೆ ಶ್ರೀ ದ್ಯಾಮಂಬಿಕಾ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಮೆರವಣಿಗೆ ಮೂಲಕ ಹೊರಡಿಸಿಕೊಂಡು ಪದ್ಧತಿಯಂತೆ ಕೊಂಡದ ಬಾವಿಗೆ ಬಂದು ಗ್ರಾಮದೇವತೆ ದ್ಯಾಮಾಂಬಿಕಾ ದೇವಿಗೆ ಸ್ನಾನ, ಪೂಜೆ ನಡೆಯಿತು.
ನಂತರ ಬಳೆಗಾರ ಮನೆಗೆ ಹೋಗಿ ಗ್ರಾಮ ದೇವತೆಗೆ ಬಳೆ ತೊಡಿಸುವ ಕಾರ್ಯಕ್ರಮ, ನಂತರ ಹೂಗಾರ ಮನೆಗೆ ಬಂದ ದೇವಿಯು ಹೂ, ದಂಡಿ ಮುಡಿಸಿಕೊಂಡು ನಂತರ ಶಂಕರಗೌಡರ ಮನೆಗೆ ಬಂದು ಕುಳಿತ ಗ್ರಾಮ ದೇವತೆಗೆ ಪೂಜೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.