ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ ಪುಣ್ಯಸ್ಮರಣೋತ್ಸವ,ವೀರಮಾಹೇಶ್ವರ ವಟುಗಳಿಗೆ ಅಯ್ಯಾಚಾರ
ಯಲಬುರ್ಗಾ : ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ.ನಿತ್ಯವೂ ಸ್ನಾನ ಮಾಡಿ ಪೂಜೆ ಮಾಡಿದ ನಂತರ ಪ್ರಸಾದ ಸ್ವೀಕರಿಸುವ ಪದ್ಧತಿ ರೂಢಿಸಿ ಕೊಳ್ಳಬೇಕು.ಆಗ ಮಾತ್ರ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ ಎಂದು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಬಹುಭಾಷಾ ಪಂಡಿತರು, ಆಯುರ್ವೇದ ಪರಿಣಿತರು, ಸಂಗೀತ ಪ್ರವೀಣರು “ವಿದ್ಯಾಸಾಗರ” ಪದವಿ ವಿಭೂಷಿತರಾದ ಲಿo.ಗುರು ರಾಜರ್ಷಿ ಪರಮಪೂಜ್ಯ ಶ್ರೀ ಷ.ಬ್ರ.ಸಿದ್ಧರಾಮ ಶಿವಾಚಾರ್ಯ ಮಹಾ ಸ್ವಾಮಿಗಳು ಸಂಸ್ಥಾನ ಹಿರೇಮಠ ಪೂಜ್ಯರ 85 ನೇ ಪುಣ್ಯಸ್ಮರಣೋತ್ಸವ ಹಾಗೂ ವೈರಾಗ್ಯ ತಪೋನಿಧಿ, ಅರಿವರಿದ ಗುರು ಲಿo. ಪರಮಪೂಜ್ಯ ಶ್ರೀ ಷ.ಬ್ರ. ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಜಿ ಪೂಜ್ಯರ 20 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಂಗಮ ವಟುಗಳಿಗೆ ಉಚಿತ ಶಿವದೀಕ್ಷಾ (ಅಯ್ಯಚಾರ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಜಂಗಮ ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬರೂ ಅಯ್ಯಚಾರ ಸಂಸ್ಕಾರ ಪಡೆದು ಪೂಜೆ ಅನುಷ್ಟಾನಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಭಕ್ತರಿಗೆ ಶುಭ ಕೋರುವ ಕಾಯಕದಲ್ಲಿ ತೊಡಗಿ ಕೊಂಡಾಗ ಮಾತ್ರ ವೀರಶೈವ ಸಂಪ್ರದಾಯದ ಲಿಂಗಾಯತ ಜಂಗಮ ಸಮಾಜದಲ್ಲಿ ಬದುಕಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಮಾನಿಹಳ್ಳಿ ಪುರವರ್ಗಮಠದ ಪೂಜ್ಯ ಶ್ರೀ ಷ.ಬ್ರ. ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ವೀರಮಾಹೇಶ್ವರ ವಟುಗಳಿಗೆ ದೀಕ್ಷಾವಿಧಿ ಬೋಧಿಸಿ ಮಾತನಾಡಿ ಭಸ್ಮ, ಮಂತ್ರ, ಪೂಜೆ, ಶಿವನ ಆರಾಧನೆ, ಗುರುಕಾರುಣ್ಯ, ಜಂಗಮ ಮೂಲ ಮಂತ್ರವಾಗಿದೆ. ಜನನ ಮತ್ತು ಮರಣದಲ್ಲಿಯೂ ಸಹ ಜಂಗಮರ ಅಗತ್ಯವಿದೆ.ನಾವು ಮಾಡುವ ಕಾಯಕದಲ್ಲಿ ಆನಂದ ಕಾಣುತ್ತಾ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಿದೆ.ಜಂಗಮರಾದವರು ಬೇರೆಯವರ ಬದುಕಿಗೆ ಸಂಸ್ಕಾರ ನೀಡುವ ಕಾರ್ಯ ಮಾಡಬೇಕಿದೆ ಎಂದರು.
ಬೆಳಿಗ್ಗೆ ಲಿoಗೈಕ್ಯ ಪೂಜ್ಯದ್ವಯರ ಗದ್ದುಗೆಗಳಿಗೆ ವೇದೋಕ್ತ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಗಣಾರಾಧನೆ ಜರುಗಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಅಮರಪ್ಪ ಕಲಬುರ್ಗಿ,ಸಿದ್ದಯ್ಯ ಹಿತ್ತಲಮನಿ,ವಿನಯ ಹಿರೇಮಠ ಹುಬ್ಬಳ್ಳಿ ,ರುದ್ರಯ್ಯ ಲಕಮಾಪುರಮಠ, ಸಿದ್ದರಾಮೇಶ ಬೇಲೆರಿ, ಸಂಗಪ್ಪ ರಾಮತಾಳ, ಎಸ್.ಡಿ ಅಪ್ಪಾಜಿ, ಶರಣಪ್ಪ ಹೂಗಾರ,ಬಸವರಾಜ ಜಾರಗಡ್ಡಿ, ದಿಲೀಪ ತೆಂಗಿನಕಾಯಿ, ಸಿದ್ದಯ್ಯ ಹಿರೇಮಠ ಮತ್ತಿತರರು ಇದ್ದರು.
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾಧ್ವನಿ"
Post a Comment