ಹಿಂದೂ ಸೇವಾ ಪ್ರತಿಷ್ಠಾನದಿಂದ, ಹಿಂದುತ್ವದ ಮಹತ್ವ ತಿಳಿಸುತ್ತಿರುವ ಕಾರ್ಯ ಶ್ಲಾಘನೀಯ : ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು
ಯಲಬುರ್ಗಾ : ಹಿಂದುತ್ವದ ಮಹತ್ವ, ಹಿಂದೂ ಧರ್ಮದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ತಿಳಿಸುವಂತಹ ಕೆಲಸವನ್ನು ಹಿಂದೂ ಸೇವಾ ಪ್ರತಿಷ್ಠಾನ ಮಾಡುತ್ತಿರುವುದು ಒಳ್ಳೆಯ ಕಾಯಕವಾಗಿದೆ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು ಹೇಳಿದರು.
ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಕುಟುಂಬ ಪ್ರಬೋಧನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಕುಟುಂಬ ಪ್ರಬೋಧನ ಕಾರ್ಯಕ್ರಮದ ಪ್ರಾಂತ ಸಹ ಸಂಯೋಜಕ ಡಬ್ಲ್ಯೂ ನಾಗರಾಜ್ ಮಾತನಾಡಿ ಮಾನವ ಜೀವನದ ವಿಕಾಸ ಯಾತ್ರೆಯಲ್ಲಿ ಕುಟುಂಬ ವ್ಯವಸ್ಥೆ ಮತ್ತು ಕೌಟುಂಬಿಕ ಪರಿಸರದಿಂದ ಜೀವನದ ಮಹತ್ವ ಹೆಚ್ಚುತ್ತದೆ. ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಕಲಿಸಬೇಕು ಎಂದು ಅವರು ಹೇಳಿದರು.
ಹಿಂದೂ ಸೇವಾ ಪ್ರತಿಷ್ಠಾನ ಕೊಪ್ಪಳ ಹಾಗೂ ಬಳ್ಳಾರಿ ವಿಭಾಗ ಸಂಚಾಲಕ ಭೀಮರಾವ ದೇಶಪಾಂಡೆ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಆಧುನಿಕತೆಯ ಮಧ್ಯದಲ್ಲಿ ಹಿಂದೂ ಸಂಸ್ಕಾರಗಳು ಹಾಗೂ ಮೌಲ್ಯಗಳು ಕುಸಿಯುತ್ತಿವೆ. ಸಮಾಜದ ಪ್ರತಿ ಹಿಂದೂಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.
ಹಿಂದೂ ಸೇವಾ ಪ್ರತಿಷ್ಠಾನ ತಾಲೂಕ ಸಂಯೋಜಕ ಈರನಗೌಡ ಈಳಿಗೇರ ಸ್ವಾಗತಿಸಿದರು, ಸೇವಾ ವೃತ್ತಿ ಬಗಿನಿ ಪೃಥ್ವಿ ಹಾಗೂ ಹಿಂದೂ ಸೇವಾ ಪ್ರತಿಷ್ಠಾನ ಕಚೇರಿ ವ್ಯವಸ್ಥಾಪಕಿ ರೇಣುಕಾ ಹುರುಳಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಮಶಾಲಿ ಉಪಾಧ್ಯಕ್ಷ ಈರಣ್ಣ ಹುಬ್ಬಳ್ಳಿ, ಹಿಂದೂ ಸೇವಾ ಪ್ರತಿಷ್ಠಾನ ಜಿಲ್ಲಾ ಸಮಿತಿ ಸದಸ್ಯ ರಾಘವೇಂದ್ರ ದೇಸಾಯಿ, ಮುಖಂಡರಾದ ಸುರೇಶಗೌಡ ಶಿವನಗೌಡ್ರು, ದಾನನಗೌಡ ತೊಂಡಿಹಾಳ, ಹಿಂದೂ ಸೇವಾ ಪ್ರತಿಷ್ಠಾನ ಕಾರ್ಯಕರ್ತರಾದ ಪ್ರಕಾಶ ಪೂಜಾರ, ಶರಣಪ್ಪ, ಹನುಮೇಶ, ಗೌತಮ್ ಜೋಶಿ, ಅಕ್ಕಮ್ಮ, ಹೊನ್ನಮ್ಮ, ಕಾಳಮ್ಮ ಹಾಗೂ ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಹಿಂದೂ ಸೇವಾ ಪ್ರತಿಷ್ಠಾನದ ಸೇವಾ ಕಾರ್ಯಕರ್ತರು, ಸೇವಾ ಭಗಿನಿಯರು ಮತ್ತು 32 ನವದಂಪತಿಗಳು ಭಾಗವಹಿಸಿದ್ದರು.
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾಧ್ವನಿ"
Post a Comment