ಯಾವ ಮಠದಲ್ಲಿ ಶಕ್ತಿ ಇರುತ್ತದೆಯೋ ಅಲ್ಲಿನ ಭಕ್ತರು ಸಂಸ್ಕಾರವಂತರಾಗುತ್ತಾರೆ: ಮದ್ದಾನಿ ಮಠದ ಶ್ರೀಗಳು
ಯಲಬುರ್ಗಾ : ಮಾನವಿಯ ಮೌಲ್ಯಗಳನ್ನ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಂತರಾಗಿ, ಶರಣರಾಗಿ, ಮಹಾತ್ಮರಾಗಿ ಹೋದವರು ಲಿಂಗೈಕ್ಯ ಶರಣೆ ಶಿವಮ್ಮ ತಾಯಿಯವರು ಹಾಗೂ ಲಿಂಗೈಕ್ಯ ನೀಲಕಂಠಯ್ಯ ತಾತನವರು ಎಂದು ಷಡಕ್ಷರಿ ಬ್ರಹ್ಮ ಕರಿಬಸವೇಶ್ವರ ಮದ್ದಾನಿಮಠ ಕುಷ್ಟಗಿ ಹೇಳಿದರು
ತಾಲೂಕಿನ ನಿಲೊಗಲ್ ಗ್ರಾಮದ ಹಿರೇಮಠ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಯಾವ ಮಠದಲ್ಲಿ ಶಕ್ತಿ ಇರುತ್ತದೆಯೋ ಅಲ್ಲಿನ ಜನರ ಮನಸ್ಸು ಭಕ್ತಿಯಾಗಿ ಪರಿವರ್ತನೆ ಯಾಗುತ್ತದೆ.
ಗ್ರಾಮಗಳು ಉದ್ದಾರ ವಾಗಬೇಕಾದರೆ ಸ್ವಾಮಿಗಳು ಸಂಸ್ಕಾರವಂತರಾಗಿರಬೇಕು ಅಂದಾಗ ಮಾತ್ರ ಗ್ರಾಮದ ಪ್ರತಿಯೊಬ್ಬರು ಸಂಸ್ಕಾರವಂತರಾಗುತ್ತಾರೆ. ಗುರು ಇಲ್ಲದ ಮಠವಿಲ್ಲ, ಹಿರಿಯರಿಲ್ಲದ ಮನೆಯಿಲ್ಲ ಎಂಬ ಗಾಧೆ ಮಾತು ನೆನಪಿಸುತ್ತ ದಾನ ಧರ್ಮ ಪರೋಪಕಾರ ಮಾಡಿದಾಗ ಮಠ,ಮಂದಿರಗಳು ಉದ್ಧಾರ ವಾಗುತ್ತವೆ. ಶರಣರ ವಿಚಾರ, ಪ್ರವಚನ ಕೇಳುವುದರಿಂದ ಮನ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಗ ಗುರು ಹರ್ಷಾನಂದ ಗುರೂಜಿ ಮಾತನಾಡಿ ದೇವರು ಎಲ್ಲ ಕಡೆಯು ಇರುತ್ತಾನೆ. ನಮ್ಮ ಮನಸ್ಸು ಮೆಚ್ಚುವಂತ ಕೆಲಸ ಮಾಡಬೇಕು. ಸಾರ್ಥಕತೆಯ ಬದುಕನ್ನ ಕಂಡುಕೊಳ್ಳಬೇಕು, ಸತಿ ಪತಿಗಳು ಒಂದಾಗಿ ಸಂಸಾರ ಮಾಡಿ ಸುಖದಿಂದ ಬಾಳಬೇಕು ಎಂದು ಹೇಳಿದರು.
ಮುಖಂಡ ಅಯ್ಯನಗೌಡ ಕೆಂಚಮ್ಮನವರ ಮಾತನಾಡಿ ಯುವಕರು ದುಶ್ಚಟಗಳನ್ನ ಬಿಡಬೇಕು. ಪುರಾಣ ಪೂಣ್ಯಕಥೆ ಕೇಳಿ ತತ್ವ ಸಿದ್ದಾಂತ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಿಂಗನಬಂಡಿ ಮೌನೇಶ್ವರ ಮಠದ ಮಾತೋಶ್ರೀ ಗಂಗಮ್ಮ ತಾಯಿ,ಮಾತೋಶ್ರೀ ಬಸಮ್ಮ ಹಿರೇಮಠ ಮಾತೊಶ್ರೀ ಈರಮ್ಮ ಹಿರೇಮಠ ಮುಖಂಡರುಗಳಾದ ಸಿದ್ಲಿಂಗಪ್ಪ ಕಲಕಬಂಡಿ,ಸಂಗನಗೌಡ ಪೋಲೀಸ್ ಪಾಟೀಲ, ಯಮನೂರಪ್ಪ ಗದ್ದಿ, ವಿರುಪಯ್ಯ ಸ್ವಾಮಿ,ಭೀಮನಗೌಡ ಕೊಳೂರು,ದೇವೇಂದ್ರಗೌಡ ಮಾಲಿ ಪಾಟೀಲ್,ವೀರನಗೌಡ ಪೋಲೀಸ್ ಪಾಟೀಲ್,ಪ್ರಭುಗೌಡ ಪೋಲೀಸ್ ಪಾಟೀಲ್,ಶರಣಪ್ಪ ನಿಲೋಗಲ್,ಗಾಳೇಪ್ಪ ಓಜನಹಳ್ಳಿ,ಆನಂದ ಈಳಿಗೇರ ಸೇರಿದಂತೆ ಮತ್ತೀತರರು ಪಾಲ್ಗೊಂಡಿದ್ದರು.
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾ ಧ್ವನಿ"
Post a Comment