Koppal :ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಲೋಕಾರ್ಪಣೆ

ಯಲಬುರ್ಗಾ ಪಟ್ಟಣದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಅನ್ನಸಂತರ್ಪಣೆ
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ  ಲೋಕಾರ್ಪಣೆ ಹಾಗೂ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೊಳ್ಳುವ  ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಶ್ರೀ ವಿಜಯ ದುರ್ಗಾದೇವಿ ದೇವಸ್ಥಾನ, ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ಹಾಗೂ 
ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ರಾಮನ ಘೋಷಣೆ ಕೂಗುತ್ತಾ, ಶ್ರೀರಾಮನಿಗೆ ವಿಶೇಷ ಪೂಜೆ, ಭಜನೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
 ಅನ್ನ ಸಂತರ್ಪಣೆ ಕಾರ್ಯಕ್ರಮ  ಮುಗಿದ ಬಳಿಕ  ಕರಸೇವಕರು ಯಲಬುರ್ಗಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ರಾಮನ ಘೋಷಣೆ ಕೂಗುತ್ತಾ ಬೈಕ್  ರ್‍ಯಾಲಿ  ನಡೆಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ, ಆರ್. ಎಸ್. ಎಸ್ ಮುಖಂಡ ಅಂದಪ್ಪ ನರೆಗಲ್ , ಪಟ್ಟಣ ಪಂಚಾಯತ ಸದಸ್ಯರಾದ  ಅಮರೇಶ ಹುಬ್ಬಳ್ಳಿ,ಕಳಕಪ್ಪ ತಳವಾರ,ಅಂದಯ್ಯ ಕಳ್ಳಿಮಠ, ವಸಂತ ಬಾವಿಮನಿ, ಬಸಲಿಂಗಪ್ಪ ಕೊತ್ತಲ, ಮುಖಂಡರಾದ ಹೇಮಂತಪ್ಪ ಬಡಿಗೇರ, ಪ್ರಭುರಾಜ ಕಲಬುರ್ಗಿ,ದೊಡ್ಡಯ್ಯ ಗುರುವಿನ,ವೀರಣ್ಣ ಹಳ್ಳಿ, ಸುರೇಶ ಕಮ್ಮಾರ,ಚಿನ್ನಪ್ಪ ಬಡಿಗೇರ,ಪ್ರಭು ಅಯ್ಯನಗೌಡ್ರ ,ಸುನಿಲ ಕುಲಕರ್ಣಿ,ಹರಿರಾವ ಕುಲಕರ್ಣಿ,ಗೋವಿಂದಾಚಾರ ಹೇಮಾದ್ರಿ,ಗುರುರಾಜ ಆಚಾರ ಪುರೋಹಿತ, ಆದರ್ಶ ಅಧಿಕಾರಿ, ಕುಮಾರಗೌಡ ಪಾಟೀಲ, ಕಲ್ಲೇಶ ಕರಮುಡಿ, ವಿರೇಶ ಬೆಳವಣಿಕಿ, ಮಹಾಂತೇಶ ಮಾದಿನೂರ, ರವಿತೇಜ ಅಧಿಕಾರಿ, ಈಶಯ್ಯ ಹಿರೇಮಠ ಹಾಗೂ ಹಿಂದೂಪರ ಸಂಘಟನೆಗಳ ಕರ ಸೇವಕರು, ಮಹಿಳೆಯರು, ಮುಖಂಡರುಗಳು  ಇದ್ದರು.
                   ನಿರ್ಭಯ ನ್ಯೂಸ್ ಕನ್ನಡ 
                        "ಇದು ಪ್ರಜಾಧ್ವನಿ"

Post a Comment

Previous Post Next Post

FLASH

Contact for News and Ads on Nirbhaya News Kannada : 9060723440