ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ ಭೇಟಿ
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ ಕಳ್ಳತನಕ್ಕೆ ಗುರುವಾರ ರಾತ್ರಿ ಯತ್ನ ನಡೆಸಿದ್ದು ಇದರ ಹಿನ್ನೆಲೆಯಾಗಿ ಕೊಪ್ಪಳ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಆರ್ ಹೇಮಂತ ಕುಮಾರ ಬಂಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ ಮಾತನಾಡಿ ಬಂಡಿ ಗ್ರಾಮದಲ್ಲಿ KGB ಬ್ಯಾಂಕ ಕಳ್ಳತನಕ್ಕೆ ಪ್ರಯತ್ನ ಹಾಗೂ ಬ್ಯಾಂಕ್ ಹಿಂದಿನ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಕಳ್ಳತನಕ್ಕೆ ಯತ್ನ ನಡೆದಿದೆ ಆದರೆ ಯಾವುದೇ ತರಹದ ಕಳ್ಳತನ ನಡೆದಿಲ್ಲ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ಕಳ್ಳತನಕ್ಕೆ ಯತ್ನಿಸಿದವರು ಇನ್ನು ಯಾರು ಎಂದು ತಿಳಿದುಬಂದಿಲ್ಲ, ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಯಲಬುರ್ಗಾ ಸಿಪಿಐ ಮೌನೇಶ ಪಾಟೀಲ, ಯಲಬುರ್ಗಾ ಪಿಎಸ್ಐ ವಿಜಯ ಪ್ರತಾಪ, ಬೇವೂರು ಪಿಎಸ್ಐ ಪ್ರಶಾಂತ, ಕುಕುನೂರ ಪಿಎಸ್ಐ ಗುರುರಾಜ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
Post a Comment